ಆಸಕ್ತಿಯ ಸ್ಥಳಗಳು
ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು |
---|
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು
|
ಕದ್ರಿ ಮಂಜುನಾಥ ದೇವಸ್ಥಾನ, ಮಂಗಳೂರು
|
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಮಂಗಳೂರು
|
ದರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ
|
ಕುಕ್ಕೆ ಸುಬ್ರಮಣ್ಯ ದೇವಸ್ಥಾನ
|
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
|
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
|
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಬಪ್ಪನಾಡು, ಮುಲ್ಕಿ,ಮಂಗಳೂರು ತಾಲೂಕು
|
ಶ್ರೀ ರಾಜ ರಾಜೇಶ್ವರಿ ದೇವಸ್ಥಾನ, ಪೊಳಲಿ, ಬಂಟ್ವಾಳ ತಾಲೂಕು
|
ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು 12 ನೇ ಶತಮಾನದ ದೇವಾಲಯವಾಗಿದೆ. ಇದು ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಹಾಗು ಪುತ್ತೂರು ನಗರದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಮಹಾಲಿಂಗೇಶ್ವರ ಜಾತ್ರೆಯನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಉತ್ಸವದ ಸಮಯದಲ್ಲಿ ಸುಮಾರು ಒಂದು ಲಕ್ಷ ಜನರು ಪುತ್ತೂರಿಗೆ ಭೇಟಿ ನೀಡುತ್ತಾರೆ. |
ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ ತಾಲ್ಲೂಕು
|
ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಡುಪು ,ಮಂಗಳೂರು
|
ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ ತಾಲ್ಲೂಕು
|
ಮಂಗಳೂರಿನ ಬೀಚ್ ಗಳು |
---|
ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್
|
ಸೋಮೇಶ್ವರ ಬೀಚ್
|
ತಣ್ಣೀರುಬಾವಿ ಬೀಚ್
|
ಪಣಂಬೂರು ಬೀಚ್
|
ಸುರತ್ಕಲ್ ಬೀಚ್
|
ಇತರ ಪ್ರಮುಖ ಸ್ಥಳಗಳು |
---|
ಕದ್ರಿ ಪಾರ್ಕ್![]() ಕದ್ರಿ ಪಾರ್ಕ್ ಹಂಪನಕಟ್ಟದಿಂದ ಪೂರ್ವಕ್ಕೆ 4 ಕಿ.ಮೀ ದೂರದಲ್ಲಿ ಹಾಗು NH-66 ಕ್ಕೆ ಹತ್ತಿರದಲ್ಲಿ ಕದ್ರಿ ಹಿಲ್ ಪಾರ್ಕ್ ಇದೆ. ಇದು ಮಂಗಳೂರಿನ ಅತಿ ದೊಡ್ಡ ಉದ್ಯಾನವಾಗಿದ್ದು ಸರ್ಕಾರದ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುತ್ತದೆ. ಪಾರ್ಕ್ ಮುಖ್ಯವಾಗಿ ಮಕ್ಕಳಿಗೆ ಮೀಸಲಾಗಿದೆ. ಮಕ್ಕಳ ರೈಲು, ಮತ್ತು ಇತರ ಸೌಲಭ್ಯಗಳು ಪಾರ್ಕ್ ನಲ್ಲಿವೆ. |
ಪಿಲಿಕುಳ ನಿಸರ್ಗಧಾಮ![]() ಪಿಲಿಕುಳ ಕೆರೆ ಮಂಗಳೂರಿನಿಂದ ಕೇವಲ 13 ಕಿ.ಮೀ. ದೂರದಲ್ಲಿ ಮೂಡುಶೆಡ್ಡೆ ಎಂಬಲ್ಲಿರುವ ಪಿಲಿಕುಳ ನಿಸರ್ಗಧಾಮವು ವೈವಿಧ್ಯಮಯ ವೈಶಿಷ್ಟ್ಯಗಳಿರುವ ಪಾರ್ಕ್ ಆಗಿದೆ. ಪಿಲಿಕುಳವು ಇಲ್ಲಿನ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕ ಆಸಕ್ತಿಯ ಹಲವು ವಿಷಯದಿಂದ ಜನರನ್ನು ತನ್ನೆಡೆ ಆಕರ್ಷಿಸುತ್ತಿದೆ. ಈ ಉದ್ಯಾನವನವು 370 ಎಕರೆ ಪ್ರದೇಶದಲ್ಲಿ ಉಷ್ಣವಲಯದ ಅರಣ್ಯ ಮತ್ತು ಪಿಲಿಕುಳ ಸರೋವರವನ್ನು ಹೊಂದಿದೆ. ಈ ತಾಣವು ಜೈವಿಕ ಉದ್ಯಾನವನ, ಅರ್ಬೊರೇಟಂ, ಸೈನ್ಸ್ ಸೆಂಟರ್, ಬೋಟಿಂಗ್ ಸೆಂಟರ್, ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಗಾಲ್ಫ್ ಕೋರ್ಸ್ ಇತ್ಯಾದಿಗಳನ್ನುಒಳಗೊಂಡಿದೆ. |
ಸೈಂಟ್ ಎಲೋಷಿಯಸ್ ಚಾಪೆಲ್![]() ಎಲೋಶಿಯಸ್ ಚ್ಯಾಪೆಲ್ ಸೇಂಟ್ ಅಲೋಶಿಯಸ್ ಚಾಪೆಲನ್ನು 1899-1900ರಲ್ಲಿ ನಿರ್ಮಿಸಲಾಗಿದೆ. ಈ ಚರ್ಚ್ ನಗರದ ಹೃದಯ ಭಾಗದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಚರ್ಚ್ ನ ಗೋಡೆಗಳು ಮತ್ತು ಛಾವಣಿಗಳು ಇಟಲಿಯ ಆಂಟೋನಿಯೊ ಮೊಸ್ಚೆನಿಯ ವರ್ಣಚಿತ್ರಗಳನ್ನು ಒಳಗೊಂಡಿದೆ. |
ಉಳ್ಳಾಲ ದರ್ಗಾ![]() ಉಳ್ಳಾಲ ದರ್ಗಾ ಉಳ್ಳಾಲದಲ್ಲಿ ಸೈಯದ್ ಮೊಹಮ್ಮದ್ ಶೇರಿಫುಲ್ ಮದನಿಯವರ ದರ್ಗಾ ಇದೆ. ಸೈಯದ್ ಮೊಹಮ್ಮದ್ ಶೇರಿಫುಲ್ ಮದನಿಯವರು 500 ವರ್ಷಗಳ ಹಿಂದೆ ಮದೀನಾದಿಂದ ಉಳ್ಳಾಲಕ್ಕೆ ಬಂದರು ಎಂದು ಹೇಳಲಾಗುತ್ತದೆ. ಪ್ರತಿ 5 ವರ್ಷಗಳಿಗೊಮ್ಮೆ ಇಲ್ಲಿ ಆಚರಿಸಲಾಗುವ ಉರುಸ್ ಉತ್ಸವದಲ್ಲಿ ಭಾಗವಹಿಸಲು ಅನೇಕ ರಾಜ್ಯಗಳಿಂದ ಸಾವಿರಾರು ಜನರು ಮಸೀದಿಗೆ ಭೇಟಿ ನೀಡುತ್ತಾರೆ. |
1000 ಕಂಬಗಳ ಬಸದಿ![]() ಸಾವಿರ ಕಂಬದ ಬಸದಿ ಸಾವಿರ ಕಂಬಗಳ ಬಸದಿ ಜೈನರ ಪವಿತ್ರ ದೇವಾಲಯವಾಗಿದ್ದು ಮಂಗಳೂರಿನಿಂದ 35 ಕಿ.ಮೀ. ದೂರದ ಮೂಡಬಿದಿರೆಯಲ್ಲಿದೆ. ಈ ಬಸದಿ ಜೈನ ಸಂತ ಶ್ರೀ ಚಂದ್ರನಾಥರಿಗೆ ಸಮರ್ಪಿಸಲಾಗಿದೆ. ಈ ದೇವಸ್ಥಾನವು ನೇಪಾಳಿ ಶೈಲಿಯ ವಾಸ್ತುಶಿಲ್ಪ ಹೊಂದಿದೆ. 1000 ಸ್ತಂಭದ ಬಸದಿಯು ಸುಮಾರು 560 ವರ್ಷ ಹಳೆಯದಾಗಿದೆ. ಬಸದಿಯ ಇತಿಹಾಸವನ್ನು ಗೋಡೆಗಳು ಮತ್ತು ಸ್ತಂಭಗಳ ಮೇಲೆ ಕೆತ್ತಲಾಗಿದೆ. ಬಸದಿಯ ಯಾವುದೇ ಸ್ತಂಭಗಳು ಒಂದೇ ರೀತಿ ಇಲ್ಲ ಎಲ್ಲವು ವಿಭಿನ್ನವಾಗಿ ರಚಿಸಲ್ಪಟ್ಟಿದೆ. ಈ ಬಸದಿಯು ಕಲೆ ಮತ್ತು ವಾಸ್ತುಶಿಲ್ಪ ವೈಭವದಿಂದ ಕೂಡಿದೆ. |
ಸುಲ್ತಾನ್ ಬತ್ತೇರಿ ![]() ಸುಲ್ತಾನ್ ಬತ್ತೇರಿ ಇದು ಮಂಗಳೂರು ನಗರ ಬಸ್ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿರುವ ಬೋಳೂರಿನಲ್ಲಿದೆ. ಗುರುಪುರ ನದಿಗೆ ಯುದ್ಧನೌಕೆ ಪ್ರವೇಶಿಸುವುದನ್ನು ತಡೆಗಟ್ಟಲು ಟಿಪ್ಪು ಸುಲ್ತಾನನು ಈ ಕೋಟೆ ಯನ್ನು ನಿರ್ಮಿಸಿದನು. ಈ ಕೋಟೆ ಕಪ್ಪು ಕಲ್ಲುಗಳಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ಇದರ ನಿರ್ಮಾಣವು ಅತ್ಯಾಕರ್ಷಕವಾಗಿದೆ. ಇದು ಒಂದು ಕಾವಲು ಗೋಪುರವಗಿದ್ದರೂ, ಸುತ್ತಲೂ ಫಿರಂಗಿಗಳನ್ನು ವ್ಯವಸ್ಥಿತವಾಗಿ ಜೋಡಿಸಿರುವ ಒಂದು ಸಣ್ನ ಕೋಟೆಯಹಾಗೆ ಕಾಣುತ್ತದೆ. |
ಜಮಲಾಬಾದ್ ಕೋಟೆ ಜಮಲಾಬಾದ್ ಕೋಟೆಯು ಮಂಗಳೂರಿನಿಂದ 65 ಕಿ.ಮೀ. ಹಾಗೂ ಬೆಳ್ತಂಗಡಿಯಿಂದ 8 ಕಿ.ಮೀ. ದೂರದಲ್ಲಿದೆ. ಈ ಕೋಟೆಯನ್ನು 1794ರಲ್ಲಿ ಟಿಪ್ಪು ಸುಲ್ತಾನನು ತನ್ನ ತಾಯಿ ಜಮಲಾಬಿಯ ನೆನಪಿಗಾಗಿ ಕಟ್ಟಿದ್ದಾನೆ. ಟ್ರೆಕ್ಕಿಂಗ್ ಪ್ರೀಯರಿಗೆ ಜನಪ್ರೀಯ ತಾಣವಾಗಿದೆ. |
ವೇಣೂರು ಗೋಮಟೇಶ್ವರ ಮಂಗಳೂರಿನಿಂದ ಸುಮಾರು 54 ಕಿ.ಮೀ. ಮತ್ತು ಬೆಳ್ತಂಗಡಿಯಿಂದ ಸುಮಾರು 19 ಕಿ.ಮೀ. ದೂರದಲ್ಲಿದೆ. ಇದು 38 ಅಡಿ ಎತ್ತರದ ಏಕಶಿಲೆಯ ಗೋಮಟೇಶ್ವರನ ಮೂರ್ತಿ ಹಾಗೂ ಜೈನ ಬಸದಿಗಳಿಗೆ ಪ್ರಖ್ಯಾತವಾಗಿದೆ. ಇಲ್ಲಿನ ಗೋಮಟೇಶ್ವರನ ಮೂರ್ತಿಯನ್ನು ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದಾರೆ ಎನ್ನಲಾಗಿದೆ ಮತ್ತು ಇದನ್ನು ಕ್ರಿ.ಶ. 1604 ರಲ್ಲಿ ತಿಮ್ಮಣ್ಣ ಅಜಿಲರು ಸ್ಥಾಪಿಸಿದ್ದಾರೆ. |