ಮುಚ್ಚಿ

ಜಿಲ್ಲಾಧಿಕಾರಿಗಳ ಕಾರ್ಯಾಲಯ

ಜಿಲ್ಲೆ ಎನ್ನುವುದು ನಮ್ಮ ದೇಶದಲ್ಲಿ ಒಂದು ತಳಮಟ್ಟದ ಆಡಳಿತಾತ್ಮಕ ಘಟಕವಾಗಿದೆ. ಜಿಲ್ಲೆಯ ಆಡಳಿತಶಾಹಿ ಮತ್ತು ಅದರ ರಚನೆಯುನ್ನು ಶತಮಾನಗಳ ಹಿಂದೆಯೇ ಕಲ್ಪಿಸಿಕೊಳ್ಳಲಾಗಿದೆ ಮತ್ತು ಅದಕ್ಕೊಂದು ಆಕಾರವನ್ನು ನೀಡಲಾಗಿದೆ. ಜಿಲ್ಲೆಯ ಆಡಳಿತದ ಮುಖ್ಯಸ್ಥರು ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ ಕಲೆಕ್ಟರ್ / ಜಿಲ್ಲಾ ಮ್ಯಾಜಿಸ್ಟ್ರೇಟ್ / ಜಿಲ್ಲಾಧಿಕಾರಿ ಆಗಿರುತ್ತಾರೆ .

ಜಿಲ್ಲೆಯಲ್ಲಿನ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳು ವಿವಿಧ ಕ್ರಿಯಾತ್ಮಕ ಇಲಾಖೆಗಳಿಂದ ನಡೆಸಲ್ಪಡುತ್ತವೆಯಾದರೂ ಜಿಲ್ಲೆಯ ಕಾರ್ಯಕಾರಿ ಸಂಯೋಜಕರಾಗಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕರಾಗಿ ಜಿಲ್ಲಾಧಿಕಾರಿಯವರು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಜಿಲ್ಲೆಯ ಕಂದಾಯ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳು ಸರ್ಕಾರದ ಮುಖ್ಯ ಪ್ರತಿನಿಧಿಯಾಗಿರುತ್ತಾರೆ. ಜಿಲ್ಲಾ ದಂಡಾಧಿಕಾರಿಯಾಗಿ ಅವರು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ಕಾಪಾಡುವ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಚುನಾವಣಾಧಿಕಾರಿಯಾಗಿ ಜಿಲ್ಲೆಯಲ್ಲಿ ಎಲ್ಲಾ ಚುನಾವಣೆಗಳನ್ನು ಸಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ,

ಜಿಲ್ಲಾಧಿಕಾರಿಯವರಿಗೆ ಜಿಲ್ಲೆಯ ಕಂದಾಯ ಆಡಳಿತದಲ್ಲಿ ಸಹಾಯಕ ಕಮಿಷನರವರು ಮತ್ತು ತಹಶೀಲ್ದಾರರು ಸಹಾಯ ಮಾಡುತ್ತಾರೆ. ಕಂದಾಯ ಉಪ-ವಿಭಾಗ ಎಂದು ಕರೆಯಲ್ಪಡುವ ಒಂದು ಅಥವಾ ಹೆಚ್ಚು ತಾಲೂಕುಗಳ ಕಂದಾಯ ಆಡಳಿತ ಉಸ್ತುವಾರಿಯನ್ನು ಸಹಾಯಕ ಕಮಿಷನರವರು ವಹಿಸುತ್ತಾರೆ, ಮತ್ತು ತಾಲ್ಲೂಕಿನ ಕಂದಾಯ ಆಡಳಿತ ಉಸ್ತುವಾರಿಯನ್ನು ಆಯಾ ತಹಶೀಲ್ದಾರರು ವಹಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯು 2 ಕಂದಾಯ ಉಪವಿಭಾಗಗಳಾದ ಮಂಗಳೂರು ಮತ್ತು ಪುತ್ತೂರು ಹಾಗೂ 9 ತಾಲ್ಲೂಕುಗಳಾದ ಮಂಗಳೂರು, ಮೂಡಬಿದ್ರೆ, ಮುಲ್ಕಿ, ಉಲ್ಲಾಳ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಮತ್ತು ಕಡಬ ಗಳನ್ನು ಒಳಗೊಂಡಿದೆ.

ಜಿಲ್ಲಾಧಿಕಾರಿ ಕಚೇರಿಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ನಗರದ ಹೃದಯ ಭಾಗದಲ್ಲಿದೆ. ಜಿಲ್ಲಾಧಿಕಾರಿ ಕಚೇರಿಯು ವಿವಿಧ ವಿಭಾಗಗಳನ್ನು ಹೊಂದಿದ್ದು ಅದರಲ್ಲಿ ಮುಖ್ಯವಾದದ್ದು – ಭೂಮಿಗೆ ಸಂಬಂದಿಸಿದ ಕಂದಾಯ ವಿಷಯಗಳ ವಿಭಾಗ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಚುನಾವಣಾ ವಿಭಾಗ, ಸಾರ್ವಜನಿಕ ಕುಂದುಕೊರತೆಗಳ ವಿಭಾಗ ಇತ್ಯಾದಿ.

ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಧಿಕಾರಿಯವರಿಗೆ ಆಡಳಿತ ನಿರ್ವಹಣೆಯಲ್ಲಿ ಸಹಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ), ಚುನಾವಣಾ ತಹಶೀಲ್ದಾರ್, ಶಿರಸ್ತೇದಾರು ಮತ್ತು ವಿವಿಧ ವಿಭಾಗಗಳಲ್ಲಿ ಆಯಾ ವಿಷಯ ನಿರ್ವಾಹಕರು ಇರುತ್ತಾರೆ.

ಜಿಲ್ಲೆಯು 1799 ರಲ್ಲಿ ರೂಪುಗೊಂಡಿದ್ದು ಮೇಜರ್ ಮುನ್ರೋ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿದ್ದರು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಈ ಜಿಲ್ಲೆಯ 132ನೇ ಜಿಲ್ಲಾಧಿಕಾರಿ / ಕಲೆಕ್ಟರ್ ಆಗಿದ್ದಾರೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರು :

ಪದನಾಮ ಹೆಸರು
ಜಿಲ್ಲಾಧಿಕಾರಿಗಳು ಮುಲ್ಲೈ ಮುಹಿಲನ್  ಎಂ ಪಿ, ಭಾಆಸೇ
ಅಪರ ಜಿಲ್ಲಾಧಿಕಾರಿಗಳು ಡಾ| ಜಿ.ಸಂತೋಷ್ ಕುಮಾರ್, ಕಆಸೇ