ಮುಚ್ಚಿ

ಇತಿಹಾಸ

  • ಹಿಂದೆ ಈ ಪ್ರದೇಶವು 14ನೇ ಶತಮಾನದ ವರೆಗೆ ಅಲೂಪರ ಆಳ್ವಿಕೆಯಲ್ಲಿತ್ತು, ತದನಂತರ ವಿಜಯನಗರ ಅರಸರು, ಕೆಳದಿ ನಾಯಕರು, ಹೈದರಾಲಿ, ಟಿಪ್ಪು ಸುಲ್ತಾನ್ ಆಳಿದ್ದರು. 1799ರಲ್ಲಿ ಇಲ್ಲಿ ಬ್ರಿಟಿಷರ ಅಧಿಪತ್ಯ ಶುರುವಾಯಿತು
  • 1860ರ ಹಿಂದೆ ದಕ್ಷಿಣ ಕನ್ನಡವು ಕೆನರಾ ಜಿಲ್ಲೆಯ ಒಂದು ಭಾಗವಾಗಿದ್ದು ಮದ್ರಾಸ್ ಪ್ರೆಸಿಡೆನ್ಸಿಯ ಆಳ್ವಿಕೆಗೆ ಒಳಪಟ್ಟಿತ್ತು
  • 1860ರಲ್ಲಿ ಕೆನರಾ ಜಿಲ್ಲೆಯನ್ನು ಉತ್ತರ ಕೆನರಾ ಮತ್ತು ದಕ್ಷಿಣ ಕೆನರಾ ಎಂದು 2 ಭಾಗಗಳಾಗಿ ವಿಂಗಡಿಸಲಾಯಿತು
  • 1956ರಲ್ಲಿ ರಾಜ್ಯಗಳ ಪುನರ್ವಿಂಗಡನೆ ಸಮಯದಲ್ಲಿ ಕಾಸರಗೋಡನ್ನು ದಕ್ಷಿಣ ಕೆನ್ನಡದಿಂದ ಪ್ರತ್ಯೇಕಿಸಿ ಕೇರಳ ರಾಜ್ಯದಲ್ಲಿ ಹಾಗೂ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು
  • 1997ರಲ್ಲಿ ದಕ್ಷಿಣ ಕನ್ನಡವನ್ನು ವಿಂಗಡಿಸಿ ಈಗಿನ ದಕ್ಷಿಣ ಕನ್ನಡ ಮತ್ತು ಹೊಸದಾಗಿ ಉಡುಪಿ ಜಿಲ್ಲೆಯನ್ನು ನಿರ್ಮಿಸಲಾಯಿತು.
  • ದಕ್ಷಿಣ ಕನ್ನಡವು ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳ ತಯಾರಿಕೆಗೆ , ಬ್ಯಾಂಕಿಂಗ್, ಶಿಕ್ಷಣ, ಗೋಡಂಬಿ, ಹಾಗೂ ವಿವಿಧ ಅಡುಗೆ ಶೈಲಿಗಳಿಗೆ ಹೆಸರುವಾಸಿಯಾಗಿದೆ.
  • ಮೂಡಬಿದರೆಯು ಜೈನ ಕಾಶಿ ಎಂದು ಕರೆಯಲ್ಪಡುತ್ತದೆ. ದರ್ಮಸ್ಥಳ, ಸುಬ್ರಹ್ಮಣ್ಯ, ಉಳ್ಳಾಲ ಗಳು ಪ್ರಸಿದ್ಧ ತೀರ್ಥಯಾತ್ರಾ ಸ್ಥಳಗಳಾಗಿವೆ.