ಮುಚ್ಚಿ

ಜಿಲ್ಲೆಯ ಬಗ್ಗೆ

ದಕ್ಷಿಣ ಕನ್ನಡ (ಸೌತ್ ಕೆನರಾ) ಜಿಲ್ಲೆಯು ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿದ್ದು ಜಿಲ್ಲೆಯ ವಿಸ್ತೀರ್ಣ ಒಟ್ಟು 4859 ಚ.ಕೀ.ಮೀ ಆಗಿರುತ್ತದೆ. ಜಿಲ್ಲೆಯು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿದೆ.

ಮಂಗಳೂರು ನಗರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಾನವಾಗಿದೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅನೇಕ ಹೆಸರುವಾಸಿ ಶಿಕ್ಷಣ ಸಂಸ್ಥೆಗಳು ವಿವಿಧ ಕೋರ್ಸ್ ಗಳನ್ನು ನೀಡುತ್ತಿದ್ದು ಭಾರತ ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳನ್ನೂ ಮಂಗಳೂರು ಆಕರ್ಷಿಸುತ್ತಿದೆ. ಮಂಗಳೂರು ಬೀಚ್ , ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಪೂಜಾ ಕೇಂದ್ರಗಳಿಗೆ ಕೂಡಾ ಹೆಸರುವಾಸಿಯಾಗಿದೆ.

ಬೆಂಗಳೂರಿನಿಂದ 347 ಕೀ ಮೀ ದೂರದ ಕಡಲ ತೀರದಲ್ಲಿರುವ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು ಹಲವಾರು ಶತಮಾನಗಳಿಂದ ವ್ಯಾಪಾರದ ಕೇಂದ್ರವಾಗಿದೆ. ಈ ಪ್ರದೇಶವು ಕ್ರಿಸ್ತ ಪೂರ್ವ 14 ನೇ ಶತಮಾನದ ಅಂತ್ಯದ ತನಕ ಆಳುಪರಿಂದ ಆಳಲ್ಪಟ್ಟಿತ್ತು ಹಾಗು ಅವರ ಆಡಳಿತ ರಾಜಧಾನಿಯಾಗಿತ್ತು. 14 ನೇ ಶತಮಾನದಿಂದ 16 ನೇ ಶತಮಾನದವರೆಗೆ ಈ ಪ್ರದೇಶವು ವಿಜಯ ನಗರದ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. 15 ನೇ ಶತಮಾನದಲ್ಲಿ ಕರಾವಳಿಗೆ ಬಂದ ಪೋರ್ಚುಗೀಸರ ಪ್ರಭಾವದಿಂದ ವ್ಯಾಪಾರಕ್ಕಾಗಿ ಕಾರ್ಖಾನೆಗಳು ತೆರೆಯಲ್ಪಟ್ಟವು. 1763 ರಲ್ಲಿ ಹೈದರಾಲಿಯು ವಶಪಡಿಸಿಕೊಂಡು ಮಂಗಳೂರನ್ನು ಮೈಸೂರು ಪ್ರಾಂತ್ಯದ ಮುಖ್ಯ ಬಂದರನ್ನಾಗಿಸಿದನು. 1799 ರಲ್ಲಿ ಟಿಪ್ಪುವಿನ ಸಾಮ್ರಾಜ್ಯದ ಅವನತಿಯ ನಂತರ ಬ್ರಿಟಿಷರು ಮಂಗಳೂರನ್ನು ಕೆನರಾ ಜಿಲ್ಲೆಯ ಕೇಂದ್ರಸ್ಥಾನವಾಗಿ ಮಾಡಿದರು. ಪ್ರಮುಖ ಬಂದರನ್ನು ಹೊಂದಿರುವುದರಿಂದಾಗಿ ಈ ಕರಾವಳಿ ಪಟ್ಟಣವು ಒಂದು ವಾಣಿಜ್ಯ ಕೇಂದ್ರವಾಗಿದೆ .

ಗೂಗಲ್ ಮ್ಯಾಪ್ ನಲ್ಲಿ ಜಿಲ್ಲೆ