ತಲುಪುವುದು ಹೇಗೆ?

 

ಬಸ್ ಸೇವೆದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಮಂಗಳೂರು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಒಂದು ಕಡೆ (ಉತ್ತರ) ಗೋವಾ ಮತ್ತು ಮುಂಬೈಗಳನ್ನು ಇನ್ನೊಂದು ಕಡೆ (ದಕ್ಷಿಣ) ಕೊಚಿನ್ (ಕೇರಳ) ಸಂಪರ್ಕಿಸುವ NH-66 (ಹಿಂದಿನ NH-17)ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು) ತೀರದಲ್ಲಿ ಹಾದುಹೋಗುತ್ತದೆ. NH-48 ಮಂಗಳೂರಿಗೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಪರ್ಕ ಕಲ್ಪಿಸುತ್ತದೆ.

 

 ಮಂಗಳೂರಿಗೆ ಉತ್ತಮ ರೈಲ್ವೆ ಸಂಪರ್ಕವಿದೆ. ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕೊಂಕಣ ರೈಲು ಸೇವೆರೈಲ್ವೆ ಮಾರ್ಗವು ಜಿಲ್ಲೆಯ ಮೂಲಕ (ಮಂಗಳೂರು) ಹಾದುಹೋಗುತ್ತದೆ. ಮಂಗಳೂರು ನಗರ ರೈಲು ನಿಲ್ದಾಣ (ನಗರದ ಹೃದಯಭಾಗದಲ್ಲಿರುವ ಮಂಗಳೂರು ಸಂಟ್ರಲ್) ಮತ್ತು ಕಂಕನಾಡಿ ರೈಲು ನಿಲ್ದಾಣ (ನಗರದ ಹೃದಯ ಭಾಗದಿಂದ 5 ಕಿ.ಮೀ. ದೂರದಲ್ಲಿರುವ ಮಂಗಳೂರಿನ ಜಂಕ್ಷನ್) 2 ಪ್ರಮುಖ ರೈಲು ನಿಲ್ದಾಣಗಳು.

 

ವಿಮಾನ ಸೇವೆದಕ್ಷಿಣ ಕನ್ನಡ ಜಿಲ್ಲೆಯು ಉತ್ತಮ ವಾಯುಮಾರ್ಗ ಸಂಪರ್ಕವನ್ನೂ ಹೊಂದಿದೆ. ಮಂಗಳೂರಿನ ಬಜಪೆಯಲ್ಲಿರುವ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ನಗರದ ಹೃದಯ ಭಾಗದಿಂದ ಕೇವಲ 18 ಕಿ.ಮೀ ದೂರದಲ್ಲಿದೆ. ಹಲವಾರು ದಿನನಿತ್ಯದ ವಿಮಾನಗಳು ಮಂಗಳೂರಿಗೆ ಭಾರತದ ಪ್ರಮುಖ ನಗರಗಳೊಂದಿಗೆ ಮತ್ತು ಮಧ್ಯ ಪ್ರಾಚ್ಯದ ಕೆಲವು ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ.