ಮುಚ್ಚಿ

ಹವಾಮಾನ

ಹವಾಮಾನ

ಜಿಲ್ಲೆಯ ಹವಾಮಾನವು ಭಾರತದ ಇತರ ಪಶ್ಚಿಮ ಕರಾವಳಿ ಜಿಲ್ಲೆಗಳ ವ್ಯಾಪಕ ಹವಾಮಾನವನ್ನು ಹಂಚಿಕೊಂಡಿದೆ. ವರ್ಷದ ಹೆಚ್ಚಿನ ಭಾಗದಲ್ಲಿ ಇದು ಅತಿಯಾದ ಆರ್ದ್ರತೆಯನ್ನು (78%) ಹೊಂದಿರುತ್ತದೆ.

ಇಲ್ಲಿನ ನಾಲ್ಕು ಋತುಗಳು –

  1. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ – ನಾಲ್ಕು ತೇವಾಂಶಭರಿತ ತಿಂಗಳುಗಳು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಬಲ ಮಾರುತಗಳು, ಅಧಿಕ ಆರ್ದ್ರತೆ, ಭಾರಿ ಮಳೆ ಮತ್ತು ತಾಪಮಾನದಲ್ಲಿ ಸ್ವಲ್ಪ ಕುಸಿತ ಕಂಡುಬರುತ್ತದೆ.
  2. ಅಕ್ಟೋಬರ್ ಮತ್ತು ನವೆಂಬರ್ – ಎರಡು ಬೆಚ್ಚಗಿನ ಮತ್ತು ತೇವಾಂಶಭರಿತ ತಿಂಗಳುಗಳು -ನೈಋತ್ಯ ಮಾನ್ಸೂನ್ ಹಿಂದೆ ಸರಿಯುತ್ತಿರುವ ಸಮಯ.
  3. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ -ಮೂರು ತಂಪಾದ ತಿಂಗಳುಗಳು -ಸಾಮಾನ್ಯವಾಗಿ ಒಣ ಪರಿಸ್ಥಿತಿ ಇರುತ್ತದೆ
  4. ಮಾರ್ಚ್, ಏಪ್ರಿಲ್ ಮತ್ತು ಮೇ -ಮೂರು ಬೆಚ್ಚಗಿನ ತಿಂಗಳುಗಳು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಾಗುತ್ತದೆ.

ಜಿಲ್ಲೆಯ ಹವಾಮಾನ ಸಾಮಾನ್ಯವಾಗಿ ಸಮನಾಗಿರುತ್ತದೆ ಮತ್ತು ಒಳಭಾಗಗಳು ಕರಾವಳಿಗಿಂತ ಸ್ವಲ್ಪ ತಣ್ಣಗಾಗಿರುತ್ತವೆ.

ಮಳೆ

ವಾರ್ಷಿಕ ಸಾಧಾರಣ ಮಳೆ – 3912 ಮಿ.ಮಿ.