ಮುಚ್ಚಿ

ಸೇವಾ ಸಿಂಧು

ಸೇವಾ ಸಿಂಧು

ಸೇವಾ ಸಿಂಧು ಕರ್ನಾಟಕ ಸರ್ಕಾರದ ಸಾಮಾನ್ಯ ನಾಗರಿಕ ಸೇವೆ ಪೋರ್ಟಲ್ / ಸೌಕರ್ಯ ಒಂದೇ ಸ್ಥಳದಲ್ಲಿ ಸರ್ಕಾರ ಸಂಬಂಧಿತ ಸೇವೆಗಳು ಮತ್ತು ಇತರ ಮಾಹಿತಿಯನ್ನು ನೀಡುತ್ತದೆ. ಸೇವಾ ಸಿಂಧು ಒಂದೇ ಸ್ಥಳದಲ್ಲಿ ಯಾವುದೇ ವಿಭಾಗದ ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಬಹಳಷ್ಟು ಸಮಯ ಮತ್ತು ಹಣ ಉಳಿಯುತ್ತದೆ. ಇದು ಸ್ಥಳೀಯ ಘಟನೆಗಳು ಉದ್ಯೋಗಾವಕಾಶಗಳು ಹಾಗೂ ಇತರ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ನಾಗರಿಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೊಂದಾಯಿಸಿಕೊಂಡು ಸೇವೆಗಳಿಗೆ ಅರ್ಜಿ ಹಾಕುವುದು ಅಥವಾ ಅವರು ಹತ್ತಿರದ ಕೇಂದ್ರಕ್ಕೆ ಹೋಗಿ ಸೇವಾ ಕೇಂದ್ರ ಲಾಗಿನ್ ಮೂಲಕ ಸೇವೆ ಕೇಳಬಹುದು. ಪ್ರತಿ ಕೋರಿಕೆಗೆ ಒಂದು ವಿಶಿಷ್ಟ ಸ್ವೀಕೃತಿ / ಟೋಕನ್ ಸಂಖ್ಯೆ ನೀಡಲಾಗುತ್ತದೆ, ಇದು ಭವಿಷ್ಯದ ಮುನ್ನಡೆ ಕ್ರಿಯೆಗೆ ಸಹಕಾರಿಯಾಗುತ್ತದೆ. ಇದು ವಿವಿಧ ಇಲಾಖೆಗಳ ಸೇವೆಗಳ ತಡೆರಹಿತ ಏಕೀಕರಣ ಕಡೆಗೆ ಒಂದಯ ಹೆಜ್ಜೆಯಾಗಿದೆ.

ಭೇಟಿ: http://www.sevasindhu.karnataka.gov.in

ಸ್ಥಳ : ಜಿಲ್ಲಾಧಿಕಾರಿಯವರ ಕಚೇರಿ | ನಗರ : ಮಂಗಳೂರು | ಪಿನ್ ಕೋಡ್ : 575001