ಮುಚ್ಚಿ

ಕುಕ್ಕೆ ಸುಬ್ರಹ್ಮಣ್ಯ

ಮಂಗಳೂರಿನಿಂದ 104 ಕಿ.ಮೀ. ದೂರದಲ್ಲಿ ಬೆಟ್ಟಗಳ ನಡುವೆ ಇರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸುಪ್ರಸಿದ್ದ ಯಾತ್ರಾಸ್ಥಳವಾಗಿದೆ. ದೈವಿಕ ಸರ್ಪ ವಾಸುಕಿ ಮತ್ತು ಇತರ ಸರ್ಪಗಳು ಹೇಗೆ ಇಲ್ಲಿಯ ಗುಹೆಗಳಲ್ಲಿ ಸುಬ್ರಹ್ಮಣ್ಯ ದೇವರ ಅಡಿಯಲ್ಲಿ ಆಶ್ರಯ ಪಡೆದುಕೊಂಡವು ಎಂಬುದನ್ನು ಮಹಾಕಾವ್ಯಗಳಲ್ಲಿ ಹೇಳಲಾಗಿದೆ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ದೈವಿಕ ಶಕ್ತಿಯಿರುವ ಸರ್ಪ ರೂಪವೆಂದು ಎಂದು ಪೂಜಿಸಲಾಗುತ್ತದೆ. ಈ ಕ್ಷೇತ್ರವು ಸರ್ಪ ದೋಷ ನಿವಾರಣೆಗೆ ಪ್ರಸಿದ್ಧವಾಗಿದ್ದು ಸರ್ಪ ಸಂಸ್ಕಾರ ಪೂಜೆ ಇಲ್ಲಿಯ ವಿಶೇಷವಾಗಿದೆ.

ತಲುಪುವ ಬಗೆ:

ವಿಮಾನದಲ್ಲಿ

ಮಂಗಳೂರು ವಿಮಾಣ ನಿಲ್ದಾಣದಿಂದ ಸುಮಾರು 112 ಕಿ.ಮೀ.

ರೈಲಿನಿಂದ

ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 102 ಕಿ.ಮೀ

ರಸ್ತೆ ಮೂಲಕ

ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 104 ಕಿ.ಮೀ